भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Dalton’s Law of Atomic Theory

ಡಾಲ್ಟನ್ನನ ಪರಮಾಣು ಸಿದ್ಧಾಂತ.
ಡಾಲ್ಟನ್ನನ ಪರಮಾಣು ಸಿದ್ಧಾಂತದ ಮುಖ್ಯಾಂಶಗಳು ಹೀಗಿವೆ:
(a) ಎಲ್ಲಾ ವಸ್ತುಗಳು ಅತಿ ಚಿಕ್ಕದಾದ ಮತ್ತು ಅಭೇದ್ಯವಾದ, ಪರಮಾಣುಗಳೆಂಬ ಕಣಗಳಿಂದ ರಚಿತವಾಗಿವೆ.
(b) ಆಕಾರ, ಗಾತ್ರ ಮತ್ತು ತೂಕಗಳಲ್ಲಿ, ಒಂದೇ ವಸ್ತುವಿನ ಎಲ್ಲ ಪರಮಾಣುಗಳು ಸಮನಾಗಿರುತ್ತವೆ.
(c) ಪರಮಾಣುಗಳನ್ನು ಸೃಷ್ಟಿಸಲು, ನಾಶಮಾಡಲು ಹಾಗೂ ಭೇದಿಸಲು ಬರುವುದಿಲ್ಲ.
(d) ಒಂದು ಮೂಲವಸ್ತುವಿನ ಪರಮಾಣುಗಳ, ಆಕಾರ, ತೂಕ ಮತ್ತು ಗಾತ್ರವು ಮತ್ತೊಂದು ವಸ್ತುವಿನ ಪರಮಾಣುಗಳ ಆಕಾರ, ತೂಕ ಮತ್ತು ಗಾತ್ರಕ್ಕಿಂತ ಬೇರೆಯಾಗಿರುತ್ತವೆ.
(e) ಬೇರೆ ಬೇರೆ ಮೂಲವಸ್ತುಗಳ ಪರಮಾಣುಗಳು, ಸಣ್ಣ ಸಣ್ಣ ಸಂಖ್ಯೆಗಳಲ್ಲಿ ಮತ್ತು ನಿರ್ದಿಷ್ಟ ಪ್ರಮಾಣಗಳಲ್ಲಿ ಒಂದುಗೂಡಿ, ಸಂಯುಕ್ತ ಪರಮಾಣು ಅಥವಾ ಅಣುಗಳಾಗುತ್ತವೆ.

Dalton’s Law of Partial Pressure

ಡಾಲ್ಟನ್ನನ ಭಿನ್ನಾಂಶ ಒತ್ತಡ ನಿಯಮ.
ಒಂದು ವ್ಯೂಹವು ಎರಡು ಅಥವಾ ಹೆಚ್ಚು ಅನಿಲಗಳ ಮಿಶ್ರಣವಾಗಿದ್ದರೆ ಅವುಗಳ ಪೈಕಿ ಯಾವುದೇ ಒಂದು ಅನಿಲ, ಮಿಶ್ರಣ ಆಕ್ರಮಿಸಿರುವ ಇಡೀ ಗಾತ್ರವನ್ನು ಆಕ್ರಮಿಸಿದರೆ ಅದು ಹೊಂದುತ್ತಿದ್ದ ಒತ್ತಡಕ್ಕೆ, ಅನಿಲದ ಭಿನ್ನಾಂಶ ಒತ್ತಡ ಎಂದು ಹೆಸರು.

Decalcification

ಸುಣ್ಣಕ್ಷೀಣತೆ.
ಕೊಚ್ಚಣೆಯಿಂದ, ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್ ಲಯವಾಗುವಿಕೆ.

Decay

ಕೊಳೆ; ಶಿಥಿಲವಾಗು.
ಪ್ರೋಟೀನುಗಳು, ಸಾಕಷ್ಟು ಗಾಳಿಯಿರುವಲ್ಲಿ ವಿಭಜನೆ ಹೊಂದಿ ಸ್ಥಿರಸಂಯುಕ್ತಗಳಾಗಿ ಮಾರ್ಪಾಡಾಗುವಿಕೆ. ಈ ಸ್ಥಿರ ಸಂಯುಕ್ತಗಳಲ್ಲಿ, ದುರ್ವಾಸನೆ ಇರುವುದಿಲ್ಲ.

Degradation

ಶಿಥಿಲತೆ.
ಮಣ್ಣಿನಲ್ಲಿಯ ಸೋಡಿಯಂ ವಿದ್ಯುತ್ ಕಣಗಳು, ಜಲಜನಕ ವಿದ್ಯುತ್ ಕಣಗಳಿಗೆ ಅವಕಾಶ ಮಾಡಿಕೊಡುವಿಕೆ.

Degree of Alkalisation

ಕ್ಷಾರಾಂಶಪ್ರಮಾಣ.
ಮಣ್ಣಿನಲ್ಲಿರುವ, ಏಕಸಂಯೋಗಸಾಮರ್ಥ್ಯವುಳ್ಳ ಪ್ರತ್ಯಾಮ್ಲಗಳಿಂದ, Na+ ಮತ್ತು K+ ಗಳಿಗೆ ಇರುವ ಪ್ರತ್ಯಾಮ್ಲ ಬದಲಾವಣಾಶಕ್ತಿಯ ಪ್ರಮಾಣ.

Dehydration Curve

ನಿರ್ಜಲ ವಕ್ರರೇಖೆ.
ಉಷ್ಣಾಂಶವನ್ನು ಸಮಾನಾಂತರಾಕ್ಷದ ಮೇಲೂ ಮತ್ತು ಒಂದು ದ್ರಾವಣವನ್ನು ಕಾಯಿಸಿದಾಗ ಅದರಿಂದ ಲಯವಾಗುವ ಶೇಕಡ ತೇವಾಂಶವನ್ನು ಲಂಬಾಕ್ಷದ ಮೇಲೂ ಗುರುತಿಸಿದಾಗ, ಉಂಟಾಗುವ ವಕ್ರರೇಖೆ.

Density

ಸಾಂದ್ರತೆ.
ಯಾವುದಾದರೊಂದು ನಿಯತವಾದ ಒತ್ತಡ ಮತ್ತು ತಾಪದಲ್ಲಿ ವಸ್ತುವಿನ ಏಕಮಾನ ಗಾತ್ರದಲ್ಲಿರುವ ಜಡತ್ವಕ್ಕೆ ಸಾಂದ್ರತೆ ಎಂದು ಹೆಸರು.

Denitrification

ಡಿನೈಟ್ರಿಫಿಕೇಷನ್ ; ಸಾರಜನಕ ಕುಗ್ಗಿಸುವಿಕೆ.
ನೈಟ್ರೇಟ್ ಗಳು, ನೈಟ್ರೈಟ್, ಅಮೋನಿಯ ಮತ್ತು ನೈಟ್ರೋಜನ್ ಗಳಾಗಿ ಕ್ಷೀಣಿಸುವುದು. ಈ ಪರಿವರ್ತನೆ, ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಿಂದ ಹಲವು ಸಂದರ್ಭಗಳಲ್ಲಿ ಆಗುತ್ತದೆ.

Dendritic Rock

ವೃಕ್ಷಾಕಾರ ಶಿಲೆ.
ವೃಕ್ಷದ ಆಕಾರದಲ್ಲಿರುವ, ತಾಮ್ರ ಅಥವಾ ಮ್ಯಾಂಗನೀಸ್ ಗಳ ಲೋಹದ ಆಕ್ಸೈಡ್ ಗಳು ಕೂಡಿ ಬಿದ್ದ ಶಿಲೆ.

Desalinization

ಚೌಳು ಲಯವಾಗುವಿಕೆ; ಲವಣ ರಹಿತವಾಗುವಿಕೆ.
ಮಣ್ಣಿನಲ್ಲಿರುವ ಕರಗುವ ಲವಣಗಳು ತೊಳೆದು, ಹೋಗುವಿಕೆ ಅಥವಾ ಕೊಚ್ಚಿ ಹೋಗುವಿಕೆ.

Desert Soil

ಮರುಭೂಮಿ ಮಣ್ಣು.
ಈ ಮಣ್ಣು, ಮೇಲ್ಭಾಗದಲ್ಲಿ ಸಾಧಾರಣ ಬಣ್ಣವುಳ್ಳದ್ದಾಗಿದ್ದು, ತಳದಲ್ಲಿ ಸುಣ್ಣದ ವಸ್ತುಗಳಿಂದ ಕೂಡಿರುತ್ತದೆ. ಕೆಲವೆಡೆ ಮಣ್ಣಿನ ತಳದಲ್ಲಿ ಗಟ್ಟಿ ಪದರ ಕಂಡು ಬರುತ್ತದೆ.

Dielectric Constant

ವಿದ್ಯುನ್ನಿಶ್ಚಿತಸ್ಥಿರ.
ಎರಡು ಧನ ಇಲ್ಲವೆ ಋಣ ಅಯಾನ್ ಗಳ ಮಧ್ಯದ ಆಕರ್ಷಣೆಯ ಬಲವನ್ನು ಕಡಿಮೆ ಮಾಡಲು ಒಂದು ವಸ್ತುವಿಗಿರುವ ಸಾಮರ್ಥ್ಯ.

Diffusion

ವ್ಯಾಪನ; ವಿಸರಣ.
ಅನಿಲಗಳು ಹರಡಿ, ಸುತ್ತ ಮುತ್ತಲಿನ ವಾತಾವರಣದೊಂದಿಗೆ ಬೆರೆಯುವಿಕೆ.

Displacement

ಸ್ಥಾನಪಲ್ಲಟ.
ಒಂದು ಮೂಲವಸ್ತು ಒಂದು ಸಂಯುಕ್ತದೊಡನೆ ವರ್ತಿಸಿ, ಆ ಸಂಯುಕ್ತದಲ್ಲಿ ಒಂದು ಮೂಲವಸ್ತುವನ್ನು ಹೊರಗೆಡಹಿ, ಅದರ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿದ್ದರೆ, ಅಂತಹ ಕ್ರಿಯೆಯನ್ನು ಸ್ಥಾನ ಪಲ್ಲಟ ಎಂದು ಕರೆಯುತ್ತಾರೆ.

Dispersed Phase

ಪ್ರಸರಿಸಿದ ಹಂತ.
ನೈಜದ್ರಾವಣದಲ್ಲಿ ಅಸ್ಫಟಿಕ ಕಣಗಳು ಹೆಚ್ಚು ಚದುರಿರುವ ಹಂತ.

Dispersion

ಪ್ರಸರಣೆ.
ಸಂಯುಕ್ತ ವಸ್ತುಗಳಲ್ಲಿರುವ ಮೂಲವಸ್ತುಗಳು, ಬೇರೆ ಬೇರೆಯಾಗಿ ಚದುರಿರುವ ಸ್ಥಿತಿ.

Dissociation Constant

ವಿಯೋಗ ಸ್ಥಿರ.
ಸಮತೆಯನ್ನುಳಿಸಿಕೊಂಡು ಬರಲು, ಒಂದು ವಸ್ತುವಿನ ಅಣುಗಳ ಸಾಮರ್ಥ್ಯ ಮತ್ತು ಅವುಗಳ ವಿಯೋಗಜನಿತ ಅಯಾನ್ ಗಳ ಸಾಮರ್ಥ್ಯಗಳ ಮಧ್ಯೆ ಕಂಡು ಬರುವ ಸ್ಥಿರತೆಗೆ, ವಿಯೋಗ ಸ್ಥಿರ ಎಂದು ಹೆಸರು.

Distillation

ಭಟ್ಟಿ ಇಳಿಸುವಿಕೆ
ಒಂದು ದ್ರಾವಣದಲ್ಲಿನ ಬಹಳ ಮಟ್ಟಿನ ಕಶ್ಮಲಗಳನ್ನು, ದ್ರವವನ್ನು ಆವಿಯಾಗಿ ಪರಿವರ್ತಿಸುವ ಮೂಲಕ ಬೇರ್ಪಡಿಸುವ ಮತ್ತು ಆ ಆವಿಯನ್ನು ತಂಪುಮಾಡಿ ದ್ರವವನ್ನು ಪುನಃ ಪಡೆಯುವ ವಿಧಾನಕ್ಕೆ, ಭಟ್ಟಿ ಇಳಿಸುವಿಕೆ ಎಂದು ಹೆಸರು.

Disintegration

ವಿಘಟನಾಕ್ರಿಯೆ.
ಸ್ವಾಭಾವಿಕ ವಸ್ತುಗಳು, ಮಣ್ಣು, ಸಸ್ಯಉಳಿಕೆ ಮುಂತಾದವು ಭೌತಿಕ ಇಲ್ಲವೇ ರಾಸಾಯನಿಕ ಕ್ರಿಯೆಗಳಿಂದ ಒಡೆದು ಶಿಥಿಲವಾಗುವಿಕೆ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App