भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Base

ಪ್ರತ್ಯಾಮ್ಲ.
ಕೆಂಪು ಲಿಟ್ ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸಬಲ್ಲ, ಒಗರು-ಕಹಿ ರುಚಿ ಉಳ್ಳ, ಸಾಬೂನು ಸ್ಪರ್ಶವುಳ್ಳ, ಸಾಕಷ್ಟು ಹೈಡ್ರಾಕ್ಸಿಲ್ ಅಯಾನುಗಳನ್ನೊಳಗೊಂಡ ವಸ್ತು.
ಲೆವಿಸ್ ಪ್ರತ್ಯಾಮ್ಲ : ಬೇರೆ ಅಣು ಇಲ್ಲವೆ ಅಯಾನ್ ಗಳಲ್ಲಿನ ಪರಮಾಣುವಿನಿಂದ ಪಾಲುಗೊಳ್ಳಬಹುದಾದ ಜೋಡಿ ಎಲೆಕ್ಟ್ರಾನುಗಳನ್ನೊಳಗೊಂಡ ವಸ್ತು.

Basicity

ಪ್ರತ್ಯಾಮ್ಲೀಯತೆ.
ಆಮ್ಲದಣುಗಳಲ್ಲಿರುವ, ಪಲ್ಲಟಿಸಬಹುದಾದ ಜಲಜನಕದ ಪರಮಾಣುಗಳ ಸಂಖ್ಯೆಗೆ, ಆಮ್ಲದ ಪ್ರತ್ಯಾಮ್ಲೀಯತೆ ಎಂದು ಹೆಸರು.

Basic Salts

ಪ್ರತ್ಯಾಮ್ಲೀಯ ಲವಣಗಳು.
ಆಮ್ಲದ ಮೂಲ ಘಟಕದಿಂದ ಪೂರ್ಣವಾಗಿ ಸ್ಥಾನಾಂತರ ಹೊಂದದ ಪ್ರತ್ಯಾಮ್ಲದ ಹೈಡ್ರಾಕ್ಸಿಲ್ ಅಥವಾ ಆಕ್ಸೈಡ್ ಇದ್ದ ಲವಣಗಳು.

Basic Oxides

ಪ್ರತ್ಯಾಮ್ಲೀಯ ಆಕ್ಸೈಡ್ ಗಳು,
ಆಮ್ಲಗಳೊಡನೆ ವರ್ತಿಸಿ ಲವಣ ಮತ್ತು ನೀರನ್ನುಂಟುಮಾಡುವ ಆಕ್ಸೈಡುಗುಳು.

Bactericide

ಬ್ಯಾಕ್ಟೀರಿಯಾ ನಾಶಕ.
ಬ್ಯಾಕ್ಟೀರಿಯಾ ಮೇಲೆ ಪ್ರತಿಕ್ರಿಯೆ ತೋರಿ ಅವುಗಳನ್ನು ನಾಶಮಾಡುವ ವಸ್ತು.

Bacteriostatic Agent

ಬ್ಯಾಕ್ಟೀರಿಯಾ ಸ್ಥಿರಕಾರಕ.
ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ಮಾತ್ರ ತಡೆಯಬಲ್ಲ, ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇರುವ ವಸ್ತು.

Bacterium

ಬ್ಯಾಕ್ಟೀರಿಯಂ.
ಸಸ್ಯವರ್ಗದಲ್ಲಿ ಇದು ಕೆಳಮಟ್ಟಕ್ಕೆ ಸೇರಿದ ಏಕಕೋಶ ಜೀವಿ; ಇದನ್ನು ಸೂಕ್ಷ್ಮ ದರ್ಶಕ ಯಂತ್ರದಿಂದ ಮಾತ್ರ ನೋಡಬಹುದು.

Base Exchange

ಪ್ರತ್ಯಾಮ್ಲ ವಿನಿಮಯ; ಧನವಿದ್ಯುದಣು ವಿನಿಮಯ.
ಅಸ್ಫಟಿಕ ಕೇಂದ್ರದಲ್ಲಿ ಮೇಲ್ಮೈ ಮೇಲೆ ಧನ ಅಯಾನುಗಳು ಹೀರಲ್ಪಟ್ಟು, ಅದಕ್ಕೆ ಪ್ರತಿಯಾಗಿ ಸಮಜಲ ಮೊತ್ತದ ಬೇರೆ ಧನ ಅಯಾನುಗಳು ಬಿಡುಗಡೆ ಹೊಂದುವುದಕ್ಕೆ ಪ್ರತ್ಯಾಮ್ಲ ವಿನಿಮಯ ಎಂದು ಹೆಸರು

Base Map Soil

ಮಣ್ಣಿನ ಆಧಾರ ನಕಾಶೆ.
ಒಂದು ಪ್ರದೇಶದಲ್ಲಿ ಇರುವ ವಿವಿಧ ರೀತಿಯ ಮಣ್ಣುಗಳ ಸ್ಥಳ ಮತ್ತು ವ್ಯಾಪ್ತಿಗಳನ್ನು ತೋರಿಸುವ ನಕ್ಷೆ. ಇದರಲ್ಲಿ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲು ಉಪಯುಕ್ತವಾದ ಹಲವು ವಿವರಗಳನ್ನು ಕೊಡಲ್ಪಟ್ಟಿರುತ್ತದೆ.

Base Saturation

ಪ್ರತ್ಯಾಮ್ಲ ಸಂತೃಪ್ತಿ.
ಒಂದು ವಸ್ತುವಿನ ವಿನಿಮಯ ಸಂಕೀರ್ಣ ಜಲಜನಕವಲ್ಲದೆ ಉಳಿದ ಧನ ಅಯಾನುಗಳಿಂದ ತೃಪ್ತಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ಒಟ್ಟು ವಿನಿಮಯ ಸಾಮರ್ಥ್ಯದ ಶೇಕಡ ಆಗಿ ಸೂಚಿಸುತ್ತಾರೆ.

Basic Rock

ಪ್ರತ್ಯಾಮ್ಲ ಶಿಲೆ.
ಇದರಲ್ಲಿ ಸಿಲಿಕಾ ಅಂಶ ಶೇಕಡ 40-50 ರಷ್ಟು ಇರುತ್ತದೆ.
ಉದಾಹರಣೆ : ಸುಣ್ಣಕಲ್ಲು, ಟ್ರ್ಯಾಪ್, ಬೇಸಾಲ್ಟ್-ಪ್ರತ್ಯಾಮ್ಲ ಶಿಲೆಗಳು, ಆಮ್ಲ ಶಿಲೆಗಳಿಗಿಂತ ಶೀಘ್ರಗತಿಯಲ್ಲಿ ಶಿಥಿಲವಾಗುತ್ತವೆ.

Baule Unit

ಬಾಲ್ ನ ಮಾನ.
ಒಂದು ಗೊತ್ತಾದ ಸನ್ನಿವೇಶದಲ್ಲಿ ಬೆಳವಣಿಗೆಯ ಒಂದೇ ಒಂದು ಅಂಶವನ್ನು ವ್ಯತ್ಯಾಸಗೊಳಿಸಿದಾಗ, ಶೇಕಡ 50 ರಷ್ಟು ಇಳುವರಿಗೆ ಕಾರಣವಾಗುವ ಸಸ್ಯಪೋಷಕಾಂಶದ ಮೊತ್ತ.

Baule Percentage Yield concept

ಬಾಲ್ ನ ಶೇಕಡ ಇಳುವರಿ ಕಲ್ಪನೆ.
ಅಂತ್ಯದ, ಹಾಗೂ ಇಳುವರಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳ ಫಲಿತಾಂಶವನ್ನು ಸೂಚಿಸುತ್ತದೆ.

Beeta Rays

ಬೀಟಾ ಕಿರಣಗಳು.
ಇಲೆಕ್ಟ್ರಾನ್ ಗಳ ಕಿರಣಗಳು.

Benzene Ring

ಬೆನ್ ಜೀನ್ ವರ್ತುಲ.
ಆರು ಇಂಗಾಲದ ಪರಮಾಣುಗಳೊನ್ನೊಳಗೊಂಡ ಒಂದು ಬೆನ್ ಜೀನ್ ಅಣುವಿನ ಆಕೃತಿಯನ್ನು ಸೂಚಿಸುವ ಷಟ್ಕೋನಾಕೃತಿ.

Bearing Capacity

ಧಾರಣ ಸಾಮರ್ಥ್ಯ.
ಒಂದು ನಿರ್ದಿಷ್ಟ ಗಾತ್ರದ ಏಕಮಾನ ಆವರಣದ ಮೇಲೆ ಬಿದ್ದಿರುವ ಸರಾಸರಿ ಭಾರ. ಈ ಭಾರವಿದ್ದರೂ ಕೂಡ ಸಾಧಾರಣಾವರಣ ಯಾವುದೇ ರೀತಿಯ ವ್ಯತ್ಯಾಸವನ್ನು ಹೊಂದುವುದಿಲ್ಲ.

Biological Mineralisation

ಜೈವಿಕ ಖನಿಜೀಕರಣ.
ಸಾವಯವ ವಸ್ತು, ಸೂಕ್ಷ್ಮ ಜೀವಿ ಕ್ರಿಯೆಯಿಂದ ವಿಘಟನೆಯಾಗಿ ನಿರವಯವ ವಸ್ತುಗಳ ಬಿಡುಗಡೆಯಾಗುವಿಕೆ.

Binding Agent

ಬಂಧನಕಾರಿ; ಬಂಧಕ.
ಇದು ಹ್ಯೂಮಸ್, ಜೇಡಿ, ಮತ್ತು ಸುಣ್ಣ ಮಣ್ಣಿನ ಕಣಗಳನ್ನು ಒಂದುಗೂಡಿಸಿ ಸಂಯುಕ್ತ ಕಣಗಳನ್ನು ಅಸ್ತಿತ್ವಕ್ಕೆ ತರುತ್ತದೆ.

Biuret

ಬೈಯುರೆಟ್
ಒಂದು ಅಣು ಅಮೋನಿಯ ಬಿಡುಗಡೆ ಹೊಂದಿ ಎರಡು ಅಣು ಯೂರಿಯ ಒಟ್ಟುಗೂಡುವುದರಿಂದ ಉಂಟಾಗುವ ಸಂಯುಕ್ತ ವಸ್ತು. ಇದು ಸಸ್ಯಗಳಿಗೆ ವಿಷಕಾರಿಯಾದ್ದರಿಂದ ಯೂರಿಯದಲ್ಲಿ ಇದರ ಅಂಶ ಶೇಕಡ 1.5 ಕ್ಕಿಂತ ಹೆಚ್ಚಿರಬಾರದು.

Black Alkali Soil

ಕಪ್ಪುಕ್ಷಾರಮಣ್ಣು.
ಹೆಚ್ಚು ವಿನಿಮಯ ಸೋಡಿಯಂ ಉಳ್ಳ ಈ ಮಣ್ಣು ಸಾವಯವ ಪದಾರ್ಥಗಳನ್ನು ತನ್ನಲ್ಲಿ ಕರಗಿಸಿಕೊಂಡು, ತೇವಾಂಶ ಆವಿಯಾದಾಗ, ಕಪ್ಪು ಬಣ್ಣದ ಗಷ್ಟನ್ನು ಭೂಮಿಯ ಮೇಲೆ ಬಿಡುತ್ತದೆ. ಆದ್ದರಿಂದ, ಹಿಲ್ ಗಾರ್ಡ್ ಎಂಬುವರು ಈ ಮಣ್ಣನ್ನು ಕಪ್ಪುಕ್ಷಾರಮಣ್ಣು ಎಂದು ಕರೆದರು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App