भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಗಮಕಡೆ

ಬೋರಲಾಗಿ; ಮುಖ ಅಡಿಯಾಗಿ

ಅಂಗಮಾ

ಪೂಜೆಗೆ ಬಳಸುವ ಕೊಣಮಾವಿನ ಸೊಪ್ಪು

ಅಂಗರ/ಅಂಗ್ರು/ಹಂಗರ

ಔಷಧಿಗುಣವುಳ್ಳ ಕಾಡುಜಾತಿಯ ಪುದೆಸಸ್ಯ; ಎಲೆಗಳ ಸಮೇತವಾಗಿ ಇದರ ಕಡ್ಡಿಯನ್ನು ಪೊರಕೆಯಾಗಿಯೂ, ಗುಡಿಸಲಿಗೆ ಗೋಡೆಗಳ ಬದಲು ತಡಿಕೆಯಂತೆಯೂ ಬಳಸುತ್ತಾರೆ. ಇದರ ಸೊಪ್ಪನ್ನು ಅರೆದು ಕುರಕ್ಕೆ ಹಚ್ಚುತ್ತಾರೆ.
ಅಂಗರಿಗೆ ಹಸಿ ಇಲ್ಲ ಸೊಸೆಗೆ ಬಿಸಿ ಇಲ್ಲ

ಅಂಗರಿಕೆ

ನೋಡಿ -ಅಂಗರ

ಅಂಗರೀಕ

ಉಡುಗೆ

ಅಂಗರೀಕ

ದೇಹಕ್ಕೆ ಲೇಪಿಸುವ ಸುಗಂಧದ್ರವ್ಯ

ಅಂಗರೀಕ

ಅಂಗರಕ್ಷ; ರಕ್ಷಾಕವಚ

ಅಂಗರೇಕು

ನೋಡಿ – ಅಂಗರೇಕೆ

ಅಂಗರೇಕೆ: ಅಂಗರೇಖೆ

ಅಂಗೈಯಲ್ಲಿರುವ ಗೆರೆಗಳು. ಇವು ವ್ಯಕ್ತಿಯ ಸ್ವಭಾವ ಲಕ್ಷಣ ಹಾಗೂ ಭವಿಷ್ಯವನ್ನು ತಿಳಿಸುತ್ತವೆ ಎಂಬ ನಂಬಿಕೆ.
ಕುಲಗೋತ್ರದಲ್ಲಿ ಕಣ್ಣು ಕೈಕಾಲ್ನಲ್ಲಿ ಅಂಗರೇಕೆನಲ್ಲಿ ರವಷ್ಟೂ ಮಿಸ್ಟೀಕು ಇಲ್ದೆ ಇರತಕ್ಕಂತ ಒಬ್ಳು ರಾಜಕುಮಾರಿನ ನೋಡ್ಕಂಡು ಬಾ

ಅಂಗರೇಕೆ: ಅಂಗರೇಖೆ

ದೇಹಲಕ್ಷಣ
ಅಂಗರೇಕು

ಅಂಗರೇಚೆ

ನೋಡಿ – ಅಂಗರೇಕೆ

ಅಂಗಲ

ವಿರಳ

ಅಂಗಲ

ದೂರ ದೂರ

ಅಂಗಲ

ಕಡಿಮೆ

ಅಂಗಲ

ಅಂಗುಲ

ಅಂಗಲಾಗು

ಕೊಯ್ಲಿಗೆ ಬರು

ಅಂಗವಟ್ಟ

ಚೆಲುವು; ಶರೀರಸೌಷ್ಠವ (ಮೈಸೂ.ಜಿ)

ಅಂಗವಣೆ

ಕೌಶಲ್ಯ; ಚಾತುರ್ಯ

ಅಂಗವಲ್ಲಿ

ಶಲ್ಯ; ಮೈಮೇಲೆ ಹೊದ್ದುಕೊಳ್ಳುವ ವಸ್ತ್ರ

ಅಂಗವಾಡ

ಕರವಸ್ತ್ರ (ಧಾರ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App