भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಜೂರ

ಫೈಕಸ್ ಅನಾರ್ಟಿಯಾನ: ಅತ್ತಿ ಹಣ್ಣಿನ ಜಾತಿಗೆ ಸೇರಿದ ಒಂದು ಬಗೆಯ ಹಣ್ಣು (ಬಿಜಾ.ಜಿ)

ಅಂಜೂರ

ಕೇಸರಿ ಮತ್ತು ನೇರಳೆ ಮಿಶ್ರಿತ ಬಣ್ಣ (ಬಾಗ.ಜಿ)

ಅಂಜ್ರ

ಹಂಜರ

ಅಂಜ್ರ

ತಡಿಕೆ

ಅಂಜ್ರ

ಮನೆಯ ಮೇಲಿನ ಹುಲ್ಲಿನ ಛಾವಣಿ; ಸೂರು

ಅಂಜ್ರಬಿಗಿಯದು

ಮನೆ ಕಟ್ಟುವಾಗ, ಬಿದಿರನ್ನು ನಾಲ್ಕಾರು ಭಾಗಗಳಾಗಿ ಸೀಳಿ ಒಂದೊಂದೆ ಸೀಳುಗಳನ್ನು ಕೂರಿಸಲು ಆಧಾರವಾಗುವಂತೆ ತೀರುಗಳ ಮೇಲೆ ಅಡ್ಡಡ್ಡಲಾಗಿ ಕತ್ತಾಳೆ, ಸೆಣಬು, ಉಗುಣಿ ಅಂಬು, ಆಲದ ಬಿಳಲು ಮೊದಲಾದವುಗಳಿಂದ ಹಂಜರ ಬಿಗಿದು ಕಟ್ಟುವ ಕ್ರಿಯೆ (ಹಾಸ.ಜಿ)

ಅಂಟಕುಂಟ

ಅಸಂಬದ್ಧ

ಅಂಟಕುಂಟ

ಉದ್ದೇಶಿತ ಕೆಲಸಕ್ಕಾಗುವ ಅಡೆತಡೆ

ಅಂಟಕುಂಟ

ಹಾದಿತಪ್ಪಿದವ

ಅಂಟಕುಂಟ

ಆಯತವೇಳೆಯಲ್ಲಿ ಕೈಕೊಡುವ ಸ್ವಭಾವದವ (ಬಳ್ಳಾ.ಜಿ)

ಅಂಟನಾಲಿಗಿ

ನಾಲಿಗಿ ದಪ್ಪ ಆಗಿ, ಮುಳ್ಳು ಎದ್ದಿರುವಂತೆ ಭಾಸವಾಗುವ ನಾಲಿಗೆ

ಅಂಟರಳೆ

ನೋಡಿ – ಅಂಟುವಾಳ

ಅಂಟರಿಕೆ

ಆಕೇಷಿಯ ಸೀಸಿಯ: ಬಟ್ಟೆಗೆ ಸೋಕಿದರೆ ಅಂಟಿಕೊಳ್ಳುವ ಒಂದು ಬಗೆಯ ಹುಲ್ಲಿನ ತೆನೆ.
ಹೊಲದ ತುಂಬ ಬರಿ ಅಂಟರಿಕೆ ಬೆಳಕೊಂಡಿದೆ.
ಪುಟ್ಟಂಪುರ‍್ಲೆ (ಚಾಮ.ಜಿ), ಹುಲ್ಲಕ್ಕಿ (ದಕ.ಜಿ), ಬೆಂಡೆಮುಳ್ಳುಗಿಡ

ಅಂಟಲ

ಅಟ್ಟ

ಅಂಟಸುಂಟಿ

ನೋಡಿ – ಅಂಟಿಗೆ ಪಂಟಿಗೆ

ಅಂಟಾಗು

ಮೈಲಿಗೆಯಾಗು; ಮುಟ್ಟಾಗು

ಅಂಟಾಳ

ನೋಡಿ – ಅಂಟುವಾಳ

ಅಂಟಿಕೆಪಂಟಿಕೆ ಔಂತ್ಲ

ಅಂಟಿಕೆ ಪಂಟಿಕೆ ಮೇಳದಿಂದ ಸಂಗ್ರಹಿಸಿದ ದವಸ ಧಾನ್ಯ ಹಾಗೂ ಹಣದಿಂದ ಸುತ್ತಮುತ್ತಲಿನ ಊರಿನವರನ್ನು ಆಹ್ವಾನಿಸಿ ಏರ್ಪಡಿಸುವ ಸಾಮೂಹಿಕ ಔತಣಕೂಟ (ಮಲೆ) ನೋಡಿ – ಅಂಟಿಗೆ ಪಂಟಿಗೆ

ಅಂಟಿಗೆಪಂಟಿಗೆ

ಇದು ಮಲೆನಾಡಿನ ದೀಪಾವಳಿ ಸಂಪ್ರದಾಯಗಳಲ್ಲಿ ಒಂದು. ಬಲೀಂದ್ರ ಪೂಜೆಯ ದಿನ ರಾತ್ರಿ ಊರಿನ ತರುಣರು ಸೇರಿ ದೇವಸ್ಥಾನದ ನಂದಾದೀಪದಿಂದ ಜ್ಯೋತಿ ಹಚ್ಚಿಕೊಂಡು, ಅಂಟಿಗೆ ಪಂಟಿಗೆ ಹಾಡು ಹೇಳುತ್ತ, ಮೇಳ ಕಟ್ಟಿಕೊಂಡು ಮನೆ ಮನೆಗೆ ತೆರಳಿ ಅವರ ಮನೆಯ ತುಳಸಿಕಟ್ಟೆಯ ಮೇಲೆ ಜ್ಯೋತಿ ಇಟ್ಟು ಬಾಗಿಲು ತೆಗೆಸುತ್ತಾರೆ. ಮನೆಯವರು ಇವರನ್ನು ಮೇಲ್ಜಗಲಿಗೆ ಬರಮಾಡಿಕೊಂಡು ಜ್ಯೋತಿಗ ಎಣ್ಣೆ ಹಾಕಿ, ತಮ್ಮ ಮನೆಯ ದೀಪವನ್ನು ಅದರಿಂದ ಹಚ್ಚಸಿಕೊಂಡು ಹಣ, ಅಕ್ಕಿ, ತಂಡಿ ಕೊಟ್ಟು ಕಳಿಸವರು (ಮಲೆ).
ಹಬ್ಬ ಹಾಡುವುದು, ದೀಪ ನೀಡುವುದು

ಅಂಟಿನ ಉಂಡೆ

ಹುರಿಗಡಲೆ, ಮಂಡಕ್ಕಿ, ಕಡ್ಲೆಕಾಯಿಬೀಜ ಮೊದಲಾದವನ್ನು ಬೆಲ್ಲದ ಪಾಕದಲ್ಲಿ ಸೇರಿಸಿ ಕಟ್ಟಿದ ಸಿಹಿ ಉಂಡೆ (ದಾವ.ಜಿ).
ಪುರಿಉಂಡೆ (ಮೈಸೂ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App